ಹಸಿರು ಹೊನ್ನಿನ ಪೈರು – Delhi Poetry Slam

Submit your poems to Wingword Poetry Competition 2026 ✍️🥇

ಹಸಿರು ಹೊನ್ನಿನ ಪೈರು

By Narayan Rathod

🌾🌾🌾🌱🌱🌿🌿🌴🌴🌴
ಕೆಸರು ಗದ್ದೆಯೊಳು ಹಸಿರು ಹೊನ್ನಿನ ಪೈರು
ಎಲ್ಲೆಲ್ಲೂ ಹಚ್ಚ ಹಸಿರಿನ ತೇರು
ಬಂಗಾರ ಬೆಳೆವ ರೈತ ನಮ್ಮ ಅನ್ನ ದೇವರು
ಬೊಗಸೆಯಸ್ಟಾದರು ಅವಗೆ ಪ್ರೀತಿ ತೋರು

ಬೆಂಗಾಡ ಭೂಮಿಯ ಹಗಲೆಲ್ಲ ಅಗೆದು
ಕಲ್ಲು ಮುಳ್ಳುಗಳ ಆಯ್ದು 
ಬರಿಗಾಲಿನೊಳು ಕೆಸರೊಳಿಳಿದು 
ತನ್ನೆಲ್ಲ ಕಷ್ಟಗಳ ಬೆವರು ಸುರಿದು

ಇಡೀ ಜೀವವೆಲ್ಲ ಹೊಲದಲ್ಲೆ ಕಳೆದು
ಬೇಳಕು ನೀಡುವ ಜ್ಯೋತಿಯಂತೆ ಉರಿದು 
ಎಲ್ಲರ ಹೊಟ್ಟೆ ತುಂಬಲು ಕನಸುಗಳ ಹೊಸೆದು 
ಬಂಗಾರ ಬೆಳೆವನು ನೇಗಿಲ ಯೋಗಿ

ಮಳೆ ಇಲ್ಲದಾಗ ಮನದೊಳಗೆ ಮರುಗಿ
ಬೆಳೆಬಾರದಾಗ ಕನಸೆಲ್ಲ ಕರಗಿ
ಸರಕಾರ ಕೈ ಹಿಡಿಯದಾಗ ತಾನೇ ಸೊರಗಿ
ಸಾಲಗಾರರಿಂದ ಮೋಸ ಹೋಗಿ
ನಗುವನ್ನೇ ಮರತು ಮೂಕನಾಗಿ

ಕೊಂಚವಾದರೂ ಕರುಣೆ ಬಾರದೆ
ಭರವಸೆಯ ಕೈಯಾದರೂ ಹಿಡಿಯಬಾರದೆ
ಅವನಲ್ಲಿ ಹುರುಪು ತುಂಬಲಾಗದೇ
ಬನ್ನಿ ಬಾಂಧವರೆ ಅವನ ಕಣ್ಣೀರ ಒರೆಸೋಣ
ಬದುಕುವ ಭರವಸೆ ತುಂಬೋಣ
✍️✍️✍️✍️✍️


Leave a comment