ಆತ್ಮವೇ ನಾ ಬಲು ಧನ್ಯಳು – Delhi Poetry Slam

ಆತ್ಮವೇ ನಾ ಬಲು ಧನ್ಯಳು

Gowthami M

ಆತ್ಮವೇ ನಾ ಬಲು ಧನ್ಯಳು.
 ಅಖಂಡ ಬ್ರಹ್ಮಾಂಡದ ಕೋಟಿ ಅನುವಿನಲ್ಲಿ 
 ನನ್ನನ್ನು ಆರಿಸಿದಕ್ಕೆ ನಾ ಬಲು ಧನ್ಯಳು.
 
 
 ನಿನಗೆ ಯವುದೇ ಅಂತರದ ಮಿತಿ ಇಲ್ಲ.
 ನೀನು ಜಗತ್ತಿನ ಯಾವ ಶಕ್ತಿಯನ್ನಾದರೂ ಆಕರ್ಷಸಿಸಬಲ್ಲೆ.
 ನೀನು ಜಗತ್ತಿನ ಯಾವುದೇ ಸಿದ್ದಿ ಬೇಕಾದರೂ ಮಾಡಬಲ್ಲೆ.
 ಆತ್ಮವೇ ನಾ ಬಲು ಧನ್ಯಳು ನನ್ನನ್ನು ಆರಿಸಿ ಕೊಂಡದ್ದಕ್ಕಾಗಿ.
 
 
 ನಿನಗೆ ಯಾವುದೇ ಸಂಕೋಲೆಯಿಲ್ಲ.
 ನಿನಗೆ ಯಾವುದೇ ಬಂಧನವಿಲ್ಲ.
 ನಿನಗೆ ಯಾವುದೇ ಮಿತಿಗಳಿಲ್ಲ.
 ಎಲ್ಲವನ್ನು ಮೀರಿದ ಅಖಂಡ ಶಕ್ತಿ ನಿನ್ನೊಳಗೇ ಅಡಗಿದೆ.
 ಆದರೆ ಲೌಕಿಕ ಜೀವನದ ವ್ಯಾಮೋಹದಲ್ಲಿ ಸಿಕ್ಕಿ,
 ನಮ್ಮ ಅರಿವಿನ ಕಣ್ಣು ಮುಚ್ಚಿದೆ.
 
 
 ನಮ್ಮ ದೇಹವೇ ನಮ್ಮಗೆ ಶಾಶ್ವತವಲ್ಲ.
 ಇನ್ನೂ ಲೌಕಿಕ ಜೀವನದ ಬಗ್ಗೆ ವ್ಯಾಮೋಹವೇಕೆ?
 ಬ್ರಹ್ಮಾಂಡದ ಆತ್ಮವು ಮತ್ತೆ ಮತ್ತೆ ದೇಹ ಧರಿಸಿ,
 ಕೊನೆಗೆ ತನ್ನ ಮೂಲವಾದ ಬ್ರಹ್ಮಾಂಡಕ್ಕೇ ಮರಳುವುದು.
 ಪರಮಾತ್ಮನಲ್ಲಿ ಲೀನವಾಗುವುದೇ ಆತ್ಮದ ಪರಮ ಸತ್ಯ.
 
 
 ಆತ್ಮಕ್ಕೆ ಯಾವುದೇ ಜಾತಿ, ಲಿಂಗದ ಭೇದವಿಲ್ಲ.
 ಆದರೆ ದೇಹಕ್ಕೆ ಮಾತ್ರ ಲೌಕಿಕ ಜೀವನದ ಭೇದ ಅಂಟಿದೆ.
 ಅದನ್ನೆಲ್ಲ ಮೀರಿ ದೇಹ ಇರುವವರೆಗೆ ಆತ್ಮ ತೃಪ್ತಿ ಯಾಗಿ
 ಬದುಕುವುದೇ ಜೀವನ.
 
 
 ಐನ್ನೂರು ಕೋಟಿ ಬೆಲೆ ಬಾಳುವ ಶರೀರ ನಮ್ಮದು.
 ಆದರೂ ಏಕೆ ದುಃಖ,ಖಿನ್ನತೆ ಯಂತಹ ಮನೋವೈಕಲ್ಯ.
 ನಾವೆಲ್ಲ ತಾಯಿ ಸ್ವರೂಪವಾದ ಬ್ರಹ್ಮಾಂಡದ ಮಕ್ಕಳು.
 ನಾವು ಕೇಳಿದ್ದನ್ನೂ ಬ್ರಹ್ಮಾಂಡವು ಆತ್ಮದ ಮೂಲಕ ನೀಡುತ್ತದೆ.
 ಯಾವುದೇ ಸಿದ್ದಿಯನ್ನಾದರು ಮಾಡುವ ಶಕ್ತಿ ಆತ್ಮದೊಳಗೇ ಅಡಗಿದೆ.

ಆತ್ಮವೇ ನಾ ಬಲು ಧನ್ಯಳು.
 ಈ ಅದ್ಭುತವಾದ ದೇಹವನ್ನು ನನ್ನಗೆ ಕರುಣಿಸಿದ್ದಕ್ಕೆ,
 ನಾ ಬಲು ಧನ್ಯಳು.
 ನನ್ನ ಯೋಗ್ಯತೆಯನ್ನು ಮೀರಿದ,
 ನನ್ನ ಕಲ್ಪನೆಯನ್ನು ಮೀರಿದ್ದನ್ನು,
 ನನಗೆ ಕರುಣಿಸಿದ್ದಕ್ಕೆ ನಾ ಬಲು ಧನ್ಯಳು.


8 comments

  • " Thank you so much, Dr. Sandhya ma’am and Anu ma’am.
    Also, my heartfelt thanks to Shivapriya brother, Chetan brother, and Naani Yadav brother for your support and kind words."

    Gowthami .M
  • “Thank you so much for all your kind words and blessings. It truly means a lot to me.”

    Gowthami .M
  • it’s a such wonderful discription about life ……

    Naani yadav
  • Great message to everyone one.
    Wow
    Unbelievable
    Such a wonderful description.

    Anu
  • Gouthami
    Hi Gouthami
    Wow it is great description and eye opener
    it is wonderful and amazing message
    You have described and expressed the the truth of ATMA and UNIVERSE.
    We are unaware of our strength and wonders,
    it is given by UNIVERSE.
    It is asking us to play and enjoy the life and take whatever you want,sit whichever the position you need and universe is watching and always and all the time universe is with us like a big mentor and supporter. We are part of universe.
    Whatever we need
    Play the game and win the game
    Universe will hug looking at her kids

    Dr Sandhya.M.N
  • Gouthami
    it is wonderful and amazing message
    You have described and expressed the the truth of ATMA and UNIVERSE.
    We are unaware of our strength and wonders,
    it is given by UNIVERSE.
    It is asking us to play and enjoy the life and take whatever you want,sit whichever the position you need and universe is watching and always and all the time universe is with us like a big mentor and supporter. We are part of universe.
    Whatever we need
    Play the game and win the game
    Universe will hug looking at her kids

    Dr Sandhya.M.N
  • Wow..soul speaking,about it’s greatness and connection with mother universe 😊.. great work by Gowthami😊.tq and congratulations

    Shivapriya
  • Wow !!!!!

    The work of explaining how our soul should be described is excellent

    Thank you Gowthami for this wonderful description.

    CM CHETHAN

Leave a comment