By Divya Viswanath

ಪ್ರಪ್ರಥಮ ನೇಸರನ
ಆಭಕಿರಣ
ಹೊಮ್ಮುತಲಿ
ನಾವಿಕನು ಹೊರಟನು
ಚಂದ್ರನನ್ನೇ ನುಂಗಿತೆನಿಸುವ
ಅಬ್ಬರದ ಅಲೆಗಳ ಮೇಲೆ,
ನೂಕುತ್ತಾ ಹೊರಟನು
ಏಕಾಂತದಲಿ.
ಬದುಕೆಂಬ ತೆಪ್ಪವ
ಎದೆಗುಂದುತ ನುಗ್ಗಿ ಬಿರುಗಾಳಿಯ ಸೀಳಿ
ತೇಲಿ ಉಬ್ಬರವಿಳಿತದ ತೇಲಿ ಸುಳಿಯಲಿ
ಜಲ ಸಮಾಧಿಯಾಗುವ ಮುನ್ನ
ಅದೆಷ್ಟೋ ಜೀವಗಳ ಬುಝ ಹಿಡಿದು ತೋಳುಗಳಲ್ಲಿ
ಆಪ್ತರೇನೋಯಂಬಂತೆ ದಡ ಸೇರಿಸಿ
ಕೈ ಬೀಸಿ ನೆಗೆ ಬೀರಿ ವಿದಾಯ ಹೇಳುತಾ ,
ತಾ ಮರಳುವನು ತನ್ನ ದೈನಂದಿನ ವಾಸ್ತವಕೆ.
ಅಪ್ಪಳಿಸುವ ಅಲೆಗಳ ಎಣಿಕೆಯ
ಲೆಕ್ಕಾಚಾರವ ಮಾಡುವ
ಜಲ ಗುಣಿತಜ್ಞ ,
ಜೀವನದ ಅಘಾದತೆಗೂ ಸರಿತೆಯ ವೈಶಾಲ್ಯತೆಗು
ಇರುವ ಸಮಾನತೆಯ,ಅದರ ಆಳ ವೈಚಾರಿಕತೆಯ
ತತ್ವವನು ಅರಿತ ಸಾಮಾನ್ಯರ ಸರ್ವಜ್ಞ
ಇರುವನಿನ್ನೊಬ್ಬ ನಾವಿಕ ಬಹುದೂರ ಆಗಸದ ಮೇಗಡೆ
ಮಂತ್ರಮುಗ್ದ ಮಾಡುವ ಮಾಂತ್ರಿಕ
ಅವನು ಬದುಕಿನ ತೆಪ್ಪವ
ಇತ್ತ ತಿರುಗಿಸುತಲಿದ್ದರೆ ಜೀವನ
ಅತ್ತ ತಿರುವಿದರೆ ಕಷ್ಟ ಕಾರ್ಪಣ್ಯದ ಪ್ರಪಾತ
ನಗರದಿಂದ ಮನೆಯೆಡೆಗೆ ತಲಪಿಸುವ ಇಹಲೋಕದ ಈ ನಾವಿಕ
ತಮ ದಿಂದ ಬೆಳೆಕಿನೆಡೆಗೆ ಬಾಳ ನೌಕೆಯಲ್ಲಿ
ಕರೆದೊಯ್ಯುವ ಪರಲೋಕದ ಆ ನಾವಿಕ
ಇಹ ಪರ ಮಧ್ಯೆ ನಾವು ಪಯಣಿಗರು
ಮನೆ ಮನ ತೊರೆದು ಆತ್ಮ ಜ್ಯೋತಿಯ ಕಡೆಗೆ
ನಮ್ಮ ವಲಸೆ.
ಪರ್ಯಂತ ಅತ್ಯಂತ ಆಯಷ್ಯಕ
ಈ ನಾವಿಕರ ಅಭಯ ಹಸ್ತ.