By Suma Bhat
ಹಾಗೊಮ್ಮೆ, ಹೀಗೊಮ್ಮೆ
ಬಿಡುವಿಲ್ಲವಮ್ಮ ನೆನೆಯೋಕೆ ನಿನ್ನ
ಸುಖಸಂಸಾರಿ ನಾನು ಶೋಕಿಸುವುದೆನ್ನ?
ಬೇಡದಿರೋ ನೆನಪು ಬಾರದಿರೋ ಬಾಲ್ಯ
ನೆನೆನೆನೆದು ಹಾತೊರೆವುದೇನು ಚೆನ್ನ
ಕೊಟ್ಟಿಲ್ವೇ ಸತ್ತಾಗ ಕಣ್ಣೀರ ಸುಂಕ
ಉರುಳುರುಳಿ ಹೊರಳಾಡಿ ಬಿಟ್ಟೆಲ್ಲ ಬಿಂಕ
ಬಿಸಿಯುಸಿರು ಎದೆ ಸುಟ್ಟು, ಕಂಗೆಟ್ಟು, ಗೋಳಿಟ್ಟು
ಕಣ್ಣಂಗಳ ಬರಿದಾಗುವ ತಂಕ
ಬಿಡುವಿಲ್ಲ ತಾಯಿ ನೆನೆಯೋಕೆ ನಿನ್ನ
ಪುಟ್ಟನ ರಚ್ಚೆ ಕರೆಯುತ್ತಿದೆ ಮಾಡುವುದೆನ್ನ?
ಕೊಟ್ಟಿಲ್ವೇ ನಿನಗಾಗಿ ಎಷ್ಟು ಸವಿ ರಾತ್ರಿ
ಹಗಲಿರುಳು ಮನದಲ್ಲಿ ನಿನ್ನ ನೆನಪ ಜಾತ್ರಿ
ತುಮುಲದಲಿ ಬೆಂದು ನೋವಿನಲ್ಲಿ ನೆಂದು
ಅಶಾಂತಿಯ ಬೀಡಲ್ಲಿ ನಾನಾದೆ ಯಾತ್ರಿ
ಬಿಡುವಿಲ್ಲವಮ್ಮ ನೆನೆಯೋಕೆ ನಿನ್ನ
ಪತಿಯ ಅಚ್ಚೆ ಕರೆಯುತಿದೆ ಮಾಡುವುದೆನ್ನ?
ಹಾಗೊಮ್ಮೆ ಹೀಗೊಮ್ಮೆ ನೆನಪಾಗುವೆ ಒಮ್ಮೊಮ್ಮೆ
ನನ್ನ ಕೈಸುಟ್ಟಾಗ ನಿನಗೆ ಉರಿಯಾಯ್ತಲ್ಲ ಆಗ
ನಾ ಅತ್ತಾಗ ನಿನ್ನ ಕೆನ್ನೆ ಒದ್ದೆಯಾಯ್ತಲ್ಲ ಆಗ
ನಾ ಹೆತ್ತಾಗ ನೀ ನೆತ್ತರು ಹರಿಸಿದೆಯಲ್ಲ ಹಾಗ
ಹಾಗೊಮ್ಮೆ ಹೀಗೊಮ್ಮೆ ನೆನಪಾಗುವೆ ಒಮ್ಮೊಮ್ಮೆ
ನನ್ನೆದೆಯ ಮಿಡಿತಕ್ಕೆ, ಕಣ್ರೆಪ್ಪೆ ಬಡಿತಕ್ಕೆ
ಹೀಗೆ... ಉಚ್ಚ್ವಾಸಕೊಮ್ಮೆ, ನಿಶ್ವಾಸಕೊಮ್ಮೆ...
Very nice
Very nicely written. All the best!!
Thank you all so much for your wonderful words of encouragement🙏🏼🙏🏼🙏🏼. I’m really humbled.
A heart tugging tale indeed, beautifully written!
Very beautiful and touching
Heart touching lyrics, with deep emotion,a mother sentiment,with lot of haunting
memories,that always encourage us , promote us to steer forward in our life n also a missing feel,a emptiness that can’t be filled by any other person in our life are reflected very well in the poem.. congratulations suma..
Very beautiful and touching. All the best and looking forward to more poems from you
Very nicely written and heart touching. All the best
Kaavya thumba chennagi moodi bandide… padagala jodane mattu adara hindiruva bhaava, bhaavanegalu manassige naatutte…
Congratulations.. keep going ………
ಅತ್ಯುತ್ತಮವಾದ ಪದ್ಯ. ಸುಂದರವಾಗಿ ಮೂಡಿಬಂದಿದೆ.👍
Extremely brilliant 👏
Very nicely written…. Emotional and distinct
ತನ್ನ ಹತ್ತವಳ ಬಗ್ಗೆ ಇರುವ ವಾತ್ಸಲ್ಯ, , ಅವಳಿಗಾಗಿ ಹಾತೊರೆಯುವ ಮನದಾಳದ ಮಿಡಿತ-ತುಡಿತಗಳು ಈ ಕವಿತೆಯಲ್ಲಿ ಭಾವಪೂರ್ಣವಾಗಿ ಮೂಡಿ ಬಂದಿದೆ. ಅಭಿನಂದನೆಗಳು!!
Very nice
Very beautifully written!!
Thumba sogasada baravannige haagu padaagala jodanne.
The writer in you stands out…..keep giving us more of these wonderful expressions.
Very nicely written, heart touching
Very beautifully written.Captured the emotions of child and mother relations..
Heart touching poem ….god couldn’t be every where so mothers are born .. lovely
Very nice poem.
ಅದ್ಭುತವಾದ ಕವಿತೆ. ಹೃದಯ ತುಂಬಿಬಂದು ಕಣ್ಣೆವೆಗಳು ತೇವವಾದವು. ಮತ್ತೆ ಮತ್ತೆ ಓದಬೇಕೆನಿಸಿತು
Superb.
ನಿಮ್ಮೆಲ್ಲರ ಪ್ರೋತ್ಸಾಹದ, ವಿಶ್ವಾಸದ ನುಡಿಗಳಿಗೆ ನೂರು ವಂದನೆಗಳು 🙏🏼
ಆಗೊಮ್ಮೆ ಈಗೊಮ್ಮೆ ಕಾಡುವ ನೆನಪು, ಎದೆಯಲ್ಲಿ ಹಾದು ಹೋಗುವ ಚಳಕು..
ಮನದಲ್ಲಿ ಮೂಡಿ ಆಡದ ಮಾತುಗಳನ್ನು ತುಂಬಾ ಚೆನ್ನಾಗಿ ಬಿಂಬಿಸಿದ್ದೀರಾ.
ಕಾವ್ಯ ರಚನೆ, ಪದಗಳ ಜೋಡಣೆ, ಮತ್ತು ಅಂತರಾಳದ ಭಾವನೆ ತುಂಬಾ ಸ್ಪಷ್ಟವಾಗಿದೆ.
ಇನ್ನೂ, ಇನ್ನಷ್ಟು ಮತ್ತಷ್ಟು ಕವನಗಳು ನಿಮ್ಮ ಲೇಖನಿಯಿಂದ ಹೊರಬರಲಿ
ತುಂಬಾ ಚೆನ್ನಾಗಿದೆ 👌👌
You just put everything I feel about mother everyday in these beautiful words🥹
No words to describe.
Just 🙏🏼
Just keep going dear
Such heartfelt and emotional poetry Suma ! Kudos to you 👏🏼👏🏼👏🏼👏🏼
Congratulations Suma💐💐
Beautiful, Very emotional and touching .
Best wishes 👍🏻👍🏻
It is really enchanting.nijjaku manasige naatuvanthide.Keep it up and grow as a well known poet.
Very touching and very true. Though Amma was our world, v remember her eegomme aagomme in our busy schedule. Good luck and a bright future to the poet in you Suma
ಆರ್ದ್ರ ಕವಿತೆ , ಪದಗಳ ಜೋಡಣೆ ಪದ್ಯವನ್ನು ಚೆಂದ ಗಾಣಿಸಿದೆ .. ಕಾವ್ಯ ಬರೆದದ್ದಕ್ಕೆ ಅಭಿನಂದನೆಗಳು
Your poetry has such a distinctive voice. It really stands out and truly captivating. Proud of you. Hearty Congratulations and best wishes for many more 🌻😊.
Hearty congratulations Suma Bhat. I read your poem three-four times and it was so touching with emotions. God bless you n achieve many more success .
Your poems have the power touch deep. I’m so happy to appreciate your wonderful writing skills my dear friend Suma. Hope to read more and more.