ಅಂತರ್ಚಕ್ಷು

By Shwetha Harsha 

 

ಹೃದಯದ ಗುಟ್ಟುಗಳು ಸುಮಾರಿವೆ , ಬಿಚ್ಚಿಟ್ಟ ರಹಸ್ಯದ ಪರಿಣಾಮಗಳು ಸುಮಾರಿವೆ
ಜಗದ ಈ ವಿಲಾಸದಲ್ಲಿ ದುಃಖದ ಸೌಂದರ್ಯ ಇದೆ, ಸೊಬಗಿನ ಅಚ್ಚರಿ ಇದೆ
ಮನಸಿನ ಮುಳ್ಳು, ಸದಾ ಕಾಡುತಿದೆ
ಇದನ್ನು ಕೃಪೆ , ನಿರಾಶೆ, ಇಷ್ಟ, ವೇದನೆ , ಏನು ಎಂದು ಕರಿಯುವುದು ಎಂದು ಅರಿಯೆ



ಜಗದ ಸತ್ಯ ಅರಿತೆ , ಸತ್ಯದ ಜಗತ್ತು ನಾ ಕಾಣೆ
ಮುಚ್ಚಿದ ಕಣ್ಣು, ಏನ್ನನ್ನೋ ನೋಡುತಿದೆ
ಜೀವನದ ಪ್ರಕಾಶ ಇಲ್ಲದೆ ಮನಸ್ಸು ಸೋತಿದೆ
ಆದರೆ ಜೀವನದ ಅರ್ಥ ಅರಿತಿದೆ , ಆತ್ಮದ ದರ್ಶನ ಆಗಿದೆ



ಸತ್ಯದ ಸ್ವರೂಪ , ಕಣ್ಣು
ಕಣ್ಣು ನೋಡಿದರೆ ಸತ್ಯ, ಎಲ್ಲವೂ ಅಸತ್ಯ
ಜ್ಞಾನದ ದೀಪ ತೋರುತಿದೆ, ಆದರೆ ಅಜ್ಞಾನದ ಕತ್ತಲಾವರಿಸಿದೆ
ಮೌನದ ಅಂತರಾಳದಲ್ಲಿ , ನೋವಾಗುತಿದೆ



ನಾನು ಕುರುಡು , ನನ್ನನ್ನು ಅಂತರ್ಚಕ್ಷು ನೋಡುತಿದೆ
ನನ್ನನ್ನು ಕೈ ಹಿಡಿದು ಇದು ಸರಿ , ಇದು ತಪ್ಪು ಎನ್ನುತಿದೆ
ಲೋಕದ ಎಲ್ಲ ಜೀವದ ದ್ವೇಷದ ಜಡ ದುಡ್ಡು, ಅಂತಸ್ತು , ಆಸ್ತಿ
ಅಸ್ತಿಯಾಗುವರು , ಈಗ ಹೇಳಿ, ನಾನು ಕುರುಡೋ , ಜಗತ್ತು ಕುರುಡೋ


ಅಂತರ್ಚಕ್ಷು , ಏನು ಮಾಡಲಿ ನಾನು
ಅಸತ್ಯವನ್ನು ಸತ್ಯ ಎನ್ನುವರು , ಹೇಗೆ ತಡೆಯಲಿ
ನಾ ಕಂಡ ಕನಸು ನುಚ್ಚು ನೂರಾಗಿದೆ , ಗೌರವ , ಪ್ರತಿಷ್ಠೆಯ ಹೊಳಪಿನಲ್ಲಿ
ನಾ ಹೇಗೆ ಸರಿ ಮಾಡಲಿ , ಮನಸ್ಸುಗಳನ್ನು , ಹೃದಯಗಳನ್ನು



ಆ ರಾತ್ರಿಯ ಕಪ್ಪು ನೀಲಿ, ನಮ್ಮಿಬ್ಬರ ಗುಟ್ಟು
ನನಗೆ ಜಗತ್ತು ಕತ್ತಲೆಯ ಕೂಪ , ನೀನು ದೀಪದ ಬೆಳಕು ,
ಪುಷ್ಪದ ಸುವಾಸನೆ, ಪ್ರಕಾಶದ ಹೊಳಪು, ಮನಸ್ಸಿನ ನೆಮ್ಮದಿ
ನಿನ್ನ ಚಿತ್ರ ನನ್ನ ಮನಸ್ಸಿನ ಒಲವು



ಬಾ, ನಾವು ನಮ್ಮ ಕಲ್ಪನೆಯಲ್ಲಿ, ಸೃಜನಶೀಲದ ಹಂಬಲದಲ್ಲಿ ಕನಸು ಕಟ್ಟೋಣ.


3 comments

  • The poem is very good. It touches all points that are thought provoking. Very well written. All the best.

    P. Venkata Pavan Kumar
  • The poem is very deep & beautiful. Very nice writing Shwetha. All the best.

    Santosh Kumar K C
  • ಒಳಗಣ್ಣು is better than ಅಂತರ್ಚಕ್ಷು. ಕರಿಯುವುದು should be ಕರೆಯುವುದು. ಪದ್ಯ ಚೆನ್ನಾಗಿ ಮೂಡಿಬಂದಿದೆ. ನಿನ್ನ ಅಂತರಾಳದ ದುಗುಡ ಸಮರ್ಥಕವಾಗಿ ಹೊರಹೊಮ್ಮಿದೆ. ಇದೇ ರೀತಿ ತುಂಬಾ ಬರೆ.

    Dr HR Srinatha

Leave a comment