Manassina Kanasu Nanasu

By Gowri Bhat 

 

ಮುಂಗಾರಿನ ಆಗಮನದಿ ಮೊದಲ ಕನಸು
ಪ್ರತಿ ಹನಿಯೊಂದಿಗೂ ಸೊಗಸಾದ ಕನಸು
ಮುಂಜಾನೆಯ ಮೊದಲ ಮನಸಿನ ಕನಸು
ಕನಸುಗಾರ ಕಂಡ ನೂರಾರು ಕನಸು
ಸವಿ ಸವಿಯಾದ ಈ ಮನಸ್ಸಿನ ಕನಸು.

ಸುಂದರ ಕ್ಷಣದಿ ಪ್ರೀತಿ ಮೂಡಿಸುವ ಕನಸು
ಚಂದ್ರನ ಸೌಮ್ಯದಿ ಬೆಳಕಿನಲ್ಲಿ ಮುಳುಗುವ ಕನಸು
ಜೀವಕ್ಕೆ ಜೀವ ಕೊಡುವೆ ನನ್ನ ನನಸು
ನಿನ್ನ ಜೊತೆಗಿರುವೆ ಕೊನೆ ತನಕ ಎಂದಿದೆ ಮನಸು
ಹೇ ಕನಸೇ ನೀ ಮನಸ್ಸಿನ ಕನಸು ನನಸು

ಈ ಮಿಲನ ಹೃದಯದಿ ಉಕ್ಕಿ ಬಂದ ನನಸು
ಕರುಗಿತು ಕನಸು ಮರುಗಿತು ಮನಸು
ಈ ಬಂಧನ ಆ ದೇವರು ಕೊಟ್ಟ ನನಸು
ನನ್ನ ನಿನ್ನ ನಡುವೆ ಇರುವ ಮಿಲನದ ಸೊಗಸು
ಈ ಸೊಗಸಾದ ಕನಸು ಮನಸ್ಸಿನ ಕನಸು ನನಸು


1 comment

  • Excellent writing ❤️

    Sneha

Leave a comment